ಮಂಗಳೂರು, ಅಕ್ಟೋಬರ್ 17 : ಇಂಧನ ಉತ್ಪಾದನಾ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ Shell ಕಂಪೆನಿಯು ಕಳೆದ ವರ್ಷ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (LLF)ನೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶ NX Plorer 19-20 ಯಲ್ಲಿ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ. ಬಿ. ಮತ್ತು ಪ್ರಣವ್ ವೈ. ಬಿ. ಮಂಡಿಸಿದ “Biofuel and Jaggery from waste Jackfruit” ಎಂಬ ಯೋಜನಾ ವರದಿಯು ರಾಷ್ಟ್ರ ಮಟ್ಟದ ಬಹುಮಾನ ಪಡೆದಿರುವುದಲ್ಲದೆ ಅಂತರರಾಷ್ಟ್ರೀಯ ಸಮಾವೇಶದ ಆಯ್ಕೆಗೂ ಅರ್ಹತೆ ಪಡೆದಿತ್ತು.
ಅದರ ಫಲಿತಾಂಶ ಇದೀಗ ಪ್ರಕಟವಾಗಿದ್ದು 20 ದೇಶಗಳಿಂದ ಆಯ್ಕೆಯಾದ ಒಟ್ಟು 6 ಪ್ರಾಜೆಕ್ಟ್ಗಳಲ್ಲಿ ಇವರ ಯೋಜನಾ ವರದಿಯೂ ಸೇರಿದೆ. ಭಾರತದಿಂದ ಆಯ್ಕೆಯಾದ ಏಕೈಕ ಯೋಜನಾ ವರದಿ ಇವರದ್ದಾಗಿದೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿರುವ ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದ ಕಡೆಗೆ ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಈ ಸ್ವರ್ಧೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ. ಬಿ. ಮತ್ತು ಪ್ರವೀಣ್ ವೈ. ಬಿ. ಅವರ ಸಾಧನೆಗೆ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.